ನೀ ಸ್ಪೂರ್ತಿ? 


ನೀ ಮುಖ ನೋಡಿ ತೊರೆದ ಕನ್ನಡಿಯ ಮೇಲೆ ಮೂಡಿದ ಮಂಜಿನಲ್ಲಿ ಬರೆದೆ ನಾ ಮೊದಲ ಕವನ, 

ಇಂದಿಗೂ ಆ ಕನ್ನಡಿಯಲ್ಲಿ ಮೂಡುವ ನಿನ್ನ ಕಾಲ್ಪನಿಕ ಬಿಂಬವೇ ನಾ ಬರೆವ ಪ್ರತಿ ಅಕ್ಷರಕ್ಕೂ ಸ್ಪೂರ್ತಿ! 

Advertisements

ಸಾವಿರ ದ್ವಂದಗಳು


ಶಬ್ಧಗಳ ಸದ್ದು ಇರದಿದ್ದರೂ ಮೌನವೇ ಕೇಳಿದೆ ಸಾವಿರ ಪ್ರಶ್ನೆಗಳನ್ನ; 

ಹುಡುಕಲ್ಲೆಲ್ಲಿಂದ ನಾ ಉತ್ತರಗಳನ್ನ, 

ಇರಲು ಒಂದೊಂದು ಪ್ರಶ್ನೆಗೂ ಸಾವುಇರದ ಸಾವಿರ ದ್ವಂದಗಳು! 

ಸಂಚು.


ಕಣ್ಣಂಚಿನಲ್ಲಿ ಆಯ ತಪ್ಪಿ ನಿಂತಿರುವ ಹನಿಯೊಂದು ನಡೆಸಿದೆ ಸಂಚು;

ಇನ್ನೇನು ಬೀಳಲು ತವಕ, ಇಡೀ ಕಲ್ಲು ಜಗತ್ತು ಕರಗಿಸುವ ಕೌತುಕ!

ನಿನ್ನ ನೆನಪು 


​ಹುಣ್ಣಿಮೆ ಹತ್ತಿರವಾಗುತ್ತಿದ್ದರೂ ಮನದಲ್ಲಿ ಅಮವಾಸ್ಯೆಯ ಛಾಯೆ! 

ಕೆಳೆದುಕೊಂಡಿರುವೆನೋ ಏನೋ ಎನ್ನುವ ಆಭಾಸ! 

ಕಣ್ಣಿಗೆ ಬೆಳಕು ಬೇಕೆನಿಸಿದರೂ ಮನಸ್ಸಿಗೀಗ ಯಾಕೋ ಕಣ್ಣಿಗೆ ಕಪ್ಪು ಇಟ್ಟವಳದೆ ನೆನಪು ಸದಾ! 

ಎಲ್ಲಿರುವೆ ನಿನೆಲ್ಲಿರುವೆ ಈ ಹುಣ್ಣಿಮೆಗಾದರು ಬಂದು ಸೊಕ್ಕಿನ ಚಂದ್ರನನ್ನ ನಾಚಿಸು ಚೆಲುವೆ!

ಎಚ್ಚರ ನೀ ಎಚ್ಚರ


​ಅಂದ ಕಾಡಿನ ಚಂದ ಬದುಕಿನ ಹಕ್ಕಿಗಳ ಗೂಡು ಹೊಕ್ಕು ಉಕ್ಕಿನ ಕೊಕ್ಕಿಯಿಂದ ರೆಕ್ಕೆಗಳ ಕುಕ್ಕಿ ಕುಕ್ಕಿ ಕೊಲ್ಲ ಬೇಡಾ ಅವುಗಳನ್ನ ಮಾನವ! 

ಏನೇನೂ ಇಲ್ಲದ ಬಡವರು ಕಕ್ಕಿಬಿಕ್ಕಿ ಕೂಡಿಟ್ಟ ರೊಕ್ಕ ಸುಲಿದು, ಮುತ್ತು ರತ್ನ ಹೊತ್ತು ನಕ್ಕು ನಲಿಯುವವರ ಸೊಕ್ಕಿನ ಸಂಚಾರಕ್ಕೆ ಉಕ್ಕಿನ ಸೇತುವೆ ಕಟ್ಟಬೇಡ ಕೇಳು! 

ಇತೀ ಮಿತೀ ಮಿಕ್ಕಿ ಲಜ್ಜೆಗೆಟ್ಟು ಇಟ್ಟು ನೋಡು ಒಂದು ಹೆಜ್ಜೆ ಮುಂದೆ ಅದೇ ನಾಂದಿ ನಿನ್ನ ಸರ್ವನಾಶದ ಆಹ್ವಾನಕ್ಕೆ! 

ಬರಲಿ ಸಮಯ ಮತಗಟ್ಟೆ ಹತ್ತಿ ಗುಂಡಿ ಒತ್ತುವ,  ಅಕ್ಕ ಪಕ್ಕದವರೆನ್ನದೆ ಸುತ್ತಮುತ್ತ ಏನಾಗುತ್ತಿದೆ ಎಂದು ತಿಳಿಯುವುದರೊಳಗೆ ಪಕ್ಕೆ ಎಲುಬು ಮುರಿದು ಮತ್ತು ಇಳಿಸಿ ಮನೆಯ ಮೂಲೆಯಲ್ಲಿ ಕೂರಿಸಿ ಬಿಡುವೆವು! 

@7Shashi_

ಎ beauty ಕೂತರೆ ಹೆಂಗೆ ನೀ ಮನೆಯೊಳಗೆ ಒಂಟಿ!


 

ಎ scooty ಹುಡುಗಿ ನಿನಗ್ಯಾಕೆ ಯಾವಾಗ್ಲೂ college ಸೂಟಿ?

ಆಗಿರ್ತಿಯ ಟ್ವೀಟಿನಲ್ಲಿ ಬರೀ naughty!

ಹಿಡಿಯೋದು ಯಾವಾಗ ನೀ ಪುಸ್ತಕ & ಪಾಟಿ?

ತೆಗಿಯೋದು ಎಂದು ನೀ ಧವಾಖಾನಿ in ಪ್ಯಾಟಿ?

ತೆಗೊಳೋದು ಯಾವಾಗ ನೀ testಗಂತ ರಕ್ತ, ರೋಗಿಗಳ ಚರ್ಮ ಚೂಟಿ?

ಮಾಡ್ತಿಯ ಯಾವಾಗ cross testing ಮಾಡಿಸಿ ದುಡ್ಡಿನ ಲೂಟಿ?

ಕೊಡ್ತಿಯ ಅದರಿಂದ ಯಾವಾಗ ನಮಗೆಲ್ಲಾ ನೀ ಪಾರ್ಟಿ?

ಹೀಗೆ ಕುಂತರೆ ನೀ ಟ್ವೀಟುಗಳನ್ನು ಮಾಡುತ್ತಾ plenty; ಆಗುವೆ ನೀ ಅಂಟಿ!

ಅದಕ್ಕೆ ಮಾಡು ಏನಾದರು  ಬಲು ಬೇಗ ನೀ ತುಂಟಿ!

 

ಕುಂತರೆ ನೀ ಮನೆಯೊಳಗೆ ಆಗಿ ಒಂಟಿ!

ನೋಡವರ್ಯಾರು ನಿನ್ನ ಬೊಂಬಾಟ beauty!

ಹೊರಟರೆ roadನಲ್ಲಿ ಕರಿ ಕೂದಲು ಹಾರಿಸ್ಕೊಂಡು, ಹಾಕ್ಕೊಂಡು ನೀ pink nighty;

ಹೊಡಿತಾರ್ ನೋಡು ಸೀಟಿ ಆದವರೆಲ್ಲಾ seventy!

 

ಈಗಿನ್ನೂ ನೀನು ಇರುವೆ in early twenty!

ಆದರೂ ಬಿಟ್ಕೊಂಡವರೆ ನೋಡು ಸಾವಿರ ಹುಡುಗರು thirty, sixty, ninety!

ಆಗು ನೀನು ಬೇಗ ಕಟ್ಕೊಂಡು ಜಂಟಿ!

ಇಲ್ಲಾ ಅಂದರೆ ಬಿಳತ್ತೆ ನೋಡು ಭಾರಿ penalty!

ಆಗ್ತೀಯ ಕೋಲು ಹಿಡಿಯೋ ಕುಂಟಿ;

ತೆಲೆಗೆಲ್ಲಾ ಹಾಕ್ ಬೇಕಾಗತ್ತೆ  ವಾರಕ್ಕೊಮ್ಮೆ ಗೋರಂಟಿ with guarantee!

@7Shashi_